ಸಾಮಾಜಿಕ ಕಾರ್ಯವು ಶೈಕ್ಷಣಿಕ ಶಿಸ್ತು ಮತ್ತು ಅಭ್ಯಾಸ-ಆಧಾರಿತ ವೃತ್ತಿಯಾಗಿದ್ದು, ವೈಯಕ್ತಿಕ ಮತ್ತು ಸಾಮೂಹಿಕ ಯೋಗಕ್ಷೇಮವನ್ನು ಹೆಚ್ಚಿಸಲು ವ್ಯಕ್ತಿಗಳು, ಕುಟುಂಬಗಳು, ಗುಂಪುಗಳು, ಸಮುದಾಯಗಳು ಮತ್ತು ಒಟ್ಟಾರೆಯಾಗಿ ಸಮಾಜದ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಕಾಳಜಿ ವಹಿಸುತ್ತದೆ. ಸಾಮಾಜಿಕ ಕಾರ್ಯ ಅಭ್ಯಾಸವು ಉದಾರ ಕಲೆಗಳು ಮತ್ತು STEM ಕ್ಷೇತ್ರಗಳಾದ ಮನೋವಿಜ್ಞಾನ, ಸಮಾಜಶಾಸ್ತ್ರ, ಆರೋಗ್ಯ, ರಾಜಕೀಯ ವಿಜ್ಞಾನ, ಸಮುದಾಯ ಅಭಿವೃದ್ಧಿ, ಕಾನೂನು ಮತ್ತು ಅರ್ಥಶಾಸ್ತ್ರದಿಂದ ವ್ಯವಸ್ಥೆಗಳು ಮತ್ತು ನೀತಿಗಳೊಂದಿಗೆ ತೊಡಗಿಸಿಕೊಳ್ಳಲು, ಮೌಲ್ಯಮಾಪನಗಳನ್ನು ನಡೆಸಲು, ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಾಮಾಜಿಕ
ಕಾರ್ಯಚಟುವಟಿಕೆ ಮತ್ತು ಜವಾಬ್ದಾರಿಯನ್ನು ವರ್ಧಿಸುತ್ತದೆ. ಸಾಮಾಜಿಕ ಕಾರ್ಯದ ಅಂತಿಮ ಗುರಿಗಳೆಂದರೆ ಜನರ ಜೀವನದ ಸುಧಾರಣೆ, ಕಾಳಜಿಗಳ ನಿವಾರಣೆ, ವ್ಯಕ್ತಿಗಳು ಮತ್ತು ಸಮುದಾಯಗಳ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಸಾಧನೆ
ಈ ಸಂಸ್ಥೆಯನ್ನು ಬಾಬ ಅವರು ೨೦೨೨ ರಲ್ಲಿ ತಮ್ಮ ಗೆಳೆಯರೊಂದಿಗೆ ಈ ಸಂಸ್ಥೆಯನ್ನು ತುಮಕೂರಿನಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯ ಮುಖ್ಯ ಅಧ್ಯಕ್ಷರು ಬಾಬ ರವರಾಗಿದ್ದಾರೆ. ಈ ಸಂಸ್ಥೆಯು ಎಲ್ಲ ವರ್ಗದ ಜನರಿಗೆ ನ್ಯಾಯ ಮತ್ತು ಸಹಾಯವನ್ನೂ ಒದಗಿಸಲು ಪೊರಕವಾಗಿದೆ ಮತ್ತು ಕರ್ನಾಟಕಾದ ನಾಡು ನುಡಿ ಭಾಷೆಯ ಅಭಿವೃದ್ಧಿಗೆ ಪೂರಕವಾಗಿದೆ.
ಕರ್ನಾಟಕದಲ್ಲಿ ತ ಸುಮಾರು ಎರಡು ಸಾವಿರ ಸದಸ್ಯರನ್ನು ಹೊಂದಿದ್ದು ಹಾಗೂ ತುಮಕೂರಿನಲ್ಲಿ 1000 ಜನ ಸದಸ್ಯರನ್ನು ಒಳಗೊಂಡಿದೆ. ಕರ್ನಾಟಕ ಸರ್ವ ಜನಾಂಗೀಯ ರಕ್ಷಣಾ ವೇದಿಕೆ ತುಮಕೂರು 500 ಯುವಕರನ್ನು ಒಳಗೊಂಡಿದೆ. ಇದನ್ನು ಶ್ರೀ ಬಾಬು ಸ್ಥಾಪಿಸಿದರು ಮತ್ತು ಅವರ ಅಧ್ಯಕ್ಷತೆಯಲ್ಲಿ ಇದು ತುಮಕೂರಿನಲ್ಲಿ ಹರಡಿತು. ಈ ಸಂಸ್ಥೆಯು “ಕನ್ನಡ ಮಾತ್ರ ಜಾತಿ, ಕನ್ನಡವೊಂದೇ ಧರ್ಮ, ಕನ್ನಡವೊಂದೇ ದೇವರು” ಎಂಬ ಘೋಷವಾಕ್ಯದಡಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ
ಸಂಸ್ಥೆಯ ಕಾರ್ಯಕ್ರಮಗಳು;
* ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ
* ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
* ಗಣರಾಜ್ಯೋತ್ಸವ ಕಾರ್ಯಕ್ರಮ
ಶ್ರೀ ಶಿವಕುಮಾರಸ್ವಾಮೀಜಿಯವರ ಹುಟ್ಟಿದ ದಿನದ ಆಚರಣೆ
* ಅಂಬೇಡ್ಕರ್ ಜಯಂತಿ
* ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಗಳು
* ಆರೋಗ್ಯ ಸೇವೆಗಳ ಕಾರ್ಯಕ್ರಮಗಳು
* ಶಿಕ್ಷಣ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು
* ಶ್ರೀ ಬಸವಣ್‌ಣ ಜಯಂತಿ
ಸಂಘದ ಗುರಿ ಮತ್ತು ಉದ್ದೇಶಗಳು:
ಸಂಘವು ಈ ಕೆಳಗಿನ ಗುರಿ ಮತ್ತು ಉದ್ದೇಶಗಳನ್ನು ಹೊಂದಿದೆ.
01. ಸಮಾಜದಲ್ಲಿ ಪರಸ್ಪರ ಭಾತ್ರತ್ವ, ಐಕ್ಯತೆ, ರಾಷ್ಟ್ರೀಯ ಭಾವೈಕ್ಯತೆ, ಸಹಕಾರ ಇತ್ಯಾದಿ ಭಾವನೆಗಳನ್ನು ಸದಸ್ಯರಲ್ಲಿ, ಸಾರ್ವಜನಿಕರಲ್ಲಿ, ಕಾರ್ಯಕ್ರಮ ಸಭೆ ಪ್ರವಚನ ಈ ಸಾಧನೆಗಳ ಮೂಲಕ ಮೂಡಿಸುವುದು.
02. ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಮುಂದುವರೆದು ಕಾಲೇಜು ಸ್ಥಾಪನೆಯ ಬಗ್ಗೆ ಪ್ರಯತ್ನಶೀಲರಾಗಿ, ಸಮಾಜದಲ್ಲಿ ಶಿಕ್ಷಣ ಪ್ರಸಾರಕ್ಕಾಗಿ ಶ್ರಮಿಸುವುದು.
03. ವಿದ್ಯಾರ್ಥಿ ವೇತನ, ಸಹಾಯ, ಸಾಲ, ಪಠ್ಯ ಮತ್ತು ಪತ್ಯೇತರ ಪುಸ್ತಕ, ಸಮವಸ್ತ್ರ ಇತ್ಯಾದಿ ಸವಲತ್ತುಗಳನ್ನು ಶಾಲಾ ಮಕ್ಕಳಿಗೆ ನೀಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು.
04. ತೀರಾ ಬಡತನಕ್ಕೊಳಗಾದವರಿಗೆ ಅಗತ್ಯವಿದ್ದಲ್ಲಿ ಆರ್ಥಿಕ ನೆರವನ್ನು ನೀಡುವುದು.
05. ವಿವಿಧ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವನ್ನು ಸದಸ್ಯರ ಹಿತಕ್ಕಾಗಿ ನಡೆಸುವುದು.
06. ಕಾಲಕಾಲಕ್ಕೆ ಮಕ್ಕಳಿಗಾಗಿ ವಾಕ್ ಸ್ಪರ್ಧೆಗಳನ್ನು ಏರ್ಪಡಿಸಿ ಅವರನ್ನು ಯೋಗ್ಯ ಮತ್ತು ಜ್ಞಾನ ಸಂಪನ್ನ ನಾಗರಿಕರನ್ನಾಗಿ ರೂಪಿಸುವುದು.
[2:30 pm, 9/11/2024] Md Goyse Aap Party’s: 07. ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಬಡವರಿಗೆ ನೆರವಾಗುವುದು.
08. ಉಪನ್ಯಾಸ, ಪ್ರವಚನ, ಸಾಂಸ್ಕೃತಿಕ, ಮನೋರಂಜನಾ ಇತ್ಯಾದಿ ಕಾರ್ಯಕ್ರಮಗಳನ್ನು ಸಾಧಿಸುವುದು. ಈ ನಿಟ್ಟಿನಲ್ಲಿ ನಿಯತಕಾಲಿಕೆ ಮತ್ತು ಪುಸ್ತಕಗಳ ಪ್ರಕಾಶನ ಮಾಡುವುದು.
09. ಸಾಂಸ್ಕೃತಿಕ, ಧಾರ್ಮಿಕ, ಹಾಗೂ ರಾಷ್ಟ್ರೀಯ ಹಬ್ಬ, ಉತ್ಸವಗಳ ಆಚರಣೆ.
10. ಪ್ರಥಮ ಚಿಕಿತ್ಸೆ ಸವಲತ್ತುಗಳು ಹಾಗೂ ಅಂಬುಲೆನ್ಸ್ ಸೇವೆಯನ್ನು ಸಮಾಜದ ಬಡವರ್ಗ, ದೀನ ದಲಿತರಿಗಾಗಿ ನಡೆಸುವುದು.
11. ಶಾರೀರಿಕ ತರಭೇತಿ ಕೇಂದ್ರಗಳನ್ನು ಸ್ಥಾಪಿಸಿ, ನಡೆಸುವುದು.
12. ವಿಭಿನ್ನ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡುವುದು.
13. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ, ಅವರನ್ನು ಉತ್ತಮ ಕಲಿಕೆ, ಸಂಶೋಧನೆ ಮತ್ತು ಸಾಹಿತ್ಯದತ್ತ ಪ್ರೋತ್ಸಾಹಿಸುವುದು.
14. ವತ್ತಿಪರ ತರಬೇತು ಅವಕಾಶಗಳನ್ನು ಕಲ್ಪಿಸಿ, ಸಮಾಜದ ಬಡ ವರ್ಗದವರಿಗೆ ನೆರವಾಗುವುದು.
15. ಕಡು ಬಡವರು, ಅಸಹಾಯಕರಿಗೆ ವೈದ್ಯಕೀಯ ನೆರವು, ವದ್ಧಾಪ್ಯ ನೆರವು, ಮರಣೋತ್ತರ ಖರ್ಚುಗಳನ್ನು ಭರಿಸುವುದು.
[2:30 pm, 9/11/2024] Md Goyse Aap Party’s: 16. ಅಂಧಶ್ರದ್ಧೆ, ಸಾಮಾಜಿಕ ಪಿಡುಗಾದ ವರದಕ್ಷಿಣೆ ನಿರ್ಮೂಲನೆ ಮತ್ತು ಯುವ ವ್ರಂದವನ್ನು ವೈಜ್ಞಾನಿಕ ದೃಷ್ಟಿಕೊನದತ್ತ ಪ್ರೋತ್ಸಾಹಿಸುವುದು.
17. ಸೇವಾದಳ, ರಕ್ತದಾನ ಶಿಭಿರ, ಸ್ವಾತಂತ್ರೋತ್ಸವಗಳನ್ನು ಆಚರಿಸಿ, ಸಮಾಜದ ಯುವ ವ್ರಂದವನ್ನು ದೇಶ ಪ್ರೇಮ ಹೆಚ್ಚಿಸುವಲ್ಲಿ ಪ್ರೇರೇಪಿಸುವುದು.
18. ಭೂಕಂಪ, ತ್ಸುನಾಮಿ, ಬೆಂಕಿ ಅನಾಹುತ, ನೆರೆಹಾವಳಿ, ಬರಗಾಲ ಇತ್ಯಾದಿ ಪ್ರಕ್ರತಿ ವಿಕೋಪಕ್ಕೆ ತುತ್ತಾದ ನತದೃಷ್ಟರಿಗೆ ಶೀಘ್ರ ಸಹಾಯ ಒದಗಿಸುವುದು.
19. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸುಸಾಂಗಿಕವಾಗಿ ನೆರವೇರಿಸುವ ಸಲುವಾಗಿ, ಭವಿಷ್ಯದಲ್ಲಿ ಒಂದು ಸಮಾಜ ಭವನ ನಿರ್ಮಾಣಕ್ಕಾಗಿ ಶ್ರಮಿಸುವುದು.
20. ಸಮಾಜದ ಹಿತದೃಷ್ಟಿಯಲ್ಲಿ ಹಾಗೂ ಸಂಘದ ಗುರಿ ಮತ್ತು ಉದ್ದೇಶಗಳ ಪೂರೈಕೆಗೆ ಪೂರಕವಾಗಿ ಕಾರ್ಯಚಟುವಟಿಕೆಗಳನ್ನು ಏರ್ಪಡಿಸುವುದು
ಕರ್ನಾಟಕ ಸರ್ವಜನಾಂಗ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಾಬಾ ರವರ ನೇತೃತ್ವದಲ್ಲಿ ಸಂಘಟನೆಯ ರಾಜ್ಯ ಸಂಚಾಲಕರು ಮೊಹಮ್ಮದ್ ಗೌಸ್ ಪೀರ್ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಈದಿನ ಸಂಘಟನೆಯ ರಾಜ್ಯ ಯುವಘಟಕ ಅಧ್ಯಕ್ಷರಾಗಿ ಶೌಕತ್ ಹುಸೇನ್ ಹಾಗೂ ಯುವ ಘಟಕದ ಹಲವಾರು ಪದಾಧಿರಿಗಳನ್ನು ನೇಮಕ ಮಾಡಲಾಯಿತು, ಸಂಘಟನೆಯ ಸಯ್ಯದ್ ಆಸಗರ್, ದೇವರಾಜ್, ಜಗದೀಶ್ ಬಾಬು, ಉಮರ್ ಫಾರೂಕ್, ದಾದಾಪೀರ್, ಶಾವೇಜ್, ಸುಭ್ರಮಣ್ಯ, ರವಿ, ಮುಂತಾದವರು ಉಪಸ್ಥಿತರಿದ್ದರು.
Copyright – karnatakasarvajanangasamrakshanavedike.webiz.in – 2025
Sign in to your account